ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ಕಲಾ ವಿಭಾಗದ ವಿದ್ಯಾರ್ಥಿಗಳಿಂದ ಮಾದಕ ದ್ರವ್ಯದ ವ್ಯಸನ ಮತ್ತು ದಾಸರಾಗುವಿಕೆ ಎಂಬ ವಿಷಯದ ಕುರಿತು ವಿಚಾರ ಮಂಡನೆ ಕಾರ್ಯಕ್ರಮವು ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಕಾಲೇಜಿನ ಉಪನ್ಯಾಸಕಿ ಮೇಘಾ ಆರ್. ದೇವಾಡಿಗ ಮಾತನಾಡಿ, ಮಾದಕ ದ್ರವ್ಯಗಳನ್ನು ವಿದ್ಯಾರ್ಥಿ ಸಮೂಹ ಹಾಗೂ ಹದಿಹರೆಯದವರು ಹೆಚ್ಚಾಗಿ ಪ್ರಯತ್ನಿಸುತ್ತಾರೆ. ಈ ಮೂಲಕ ಅನೇಕರು ದಾರಿ ತಪ್ಪುತ್ತಿದ್ದಾರೆ. ಹೆತ್ತವರು ತಮ್ಮ ಮಕ್ಕಳಿಗೆ ಇದರ ಬಗ್ಗೆ ಸರಿಯಾದ ತಿಳುವಳಿಕೆ ನೀಡಿದಾಗ ದುಶ್ಚಟಗಳಿಂದ ದೂರವಿರಲು ಸಾಧ್ಯ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಜೀವನ್ದಾಸ್ ಅಧ್ಯಕ್ಷತೆ ವಹಿಸಿದ್ದರು. ಕಲಾ ವಿಭಾಗದ ವಿದ್ಯಾರ್ಥಿಗಳಾದ ಶ್ರೇಯ, ಯಶ್ವಿತಾ, ಕಾರ್ತಿಕ್, ಜೋತ್ಸ್ನಾ, ಷಣ್ಮುಖ ವಂದಿಪ್, ವಿಚಾರ ಮಂಡನೆ ಮಾಡಿದರು. ಅನುಶ್ರೀ ಹಾಗೂ ಸಮೀಕ್ಷ ಪ್ರಾರ್ಥಿಸಿದರು. ಅಭಿಷೇಕ್ ಸ್ವಾಗತಿಸಿ, ವಿದ್ಯಾಶ್ರೀ ವಂದಿಸಿದರು, ವೈಷ್ಣವೀ ಕಾರ್ಯಕ್ರಮ ನಿರೂಪಿಸಿದರು.