SGFI (School Games Federation of India) ಇದರ ವತಿಯಿಂದ ತೆಲಂಗಾಣದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಚೆಸ್ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ವಿವೇಕಾನಂದ ಪದವಿ ಪೂರ್ವಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಚಿರಾಗ್ ಹಿರಿಂಜ ದ್ವಿತೀಯ ಸ್ಥಾನ ಮತ್ತು ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪಂಚಮಿ ಸರ್ಪಂಗಳ ತೃತೀಯ ಸ್ಥಾನವನ್ನು ಪಡೆದು ಕ್ರಮವಾಗಿ ರಜತ ಮತ್ತು ಕಂಚಿನ ಪದಕವನ್ನು ಗಳಿಸಿದ್ದಾರೆ.
ಚಿರಾಗ್ ಹಿರಿಂಜ ಇವರು ಪುತ್ತೂರು ತಾಲೂಕು ಬನ್ನೂರಿನ ಸಪ್ತಗಿರಿ ನಗರದ ಜಯರಾಮಗೌಡ ಎಚ್. ಮತ್ತು ಗೀತಾ ಬಿ.ವಿ. ದಂಪತಿಗಳ ಸುಪುತ್ರ. ಪಂಚಮಿ ಸರ್ಪಂಗಳ ಇವರು ಪುತ್ತೂರು ತಾಲೂಕು ಪಡೀಲ್ ಮಹಾಲಿಂಗೇಶ್ವರ ಪ್ರಸಾದ್ ಮತ್ತು ಪಾವನಾ ಪ್ರಸಾದ್ ಎಸ್. ಇವರ ಪುತ್ರಿ. ಇವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದ ಅಭಿನಂದಿಸಿದ್ದಾರೆ.