ಪುತ್ತೂರು: ಆರ್ಕಿಟೆಕ್ಚರ್ ಎಂಜಿನಿಯರಿಂಗ್ಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಳೆದ ನವೆಂಬರ್ 27ರಂದು ಬಿಡುಗಡೆ ಮಾಡಿದ ರಾಷ್ಟ್ರ ಮಟ್ಟದ ಫಲಿತಾಂಶದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಮೋನಾ ಎಸ್ ಟಿ 174ನೇ ರ್ಯಾಂಕ್ ಗಳಿಸಿದ್ದಾರೆ.
ಇತ್ತೀಚೆಗೆ ನಡೆದ ನಾಟಾ ಮತ್ತು ಜೆಇಇ ಪೇಪರ್ 2 ಫಲಿತಾಂಶವನ್ನು ಪರಿಗಣಿಸಿ ಈ ರ್ಯಾಂಕ್ ನೀಡಲಾಗಿದೆ. ಇವಳು ಹಾಸನದ ಅರಕಲಗೂಡಿನ ತಿಮ್ಮೆಗೌಡ ಮತ್ತು ಸುಮಿತ್ರ ದಂಪತಿಗಳ ಸುಪುತ್ರಿ. ವಿದ್ಯಾರ್ಥಿನಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದದವರು ಅಭಿನಂದಿಸಿದ್ದಾರೆ.