ರಾಜ್ಯ ಮಟ್ಟದ ಆನ್ಲೈನ್ ರಾಪೀಡೆಕ್ಸ್ ಕಾರ್ಪೊರೇಟ್ ಕ್ವಿಜ್
ವಿವೇಕಾನಂದ ಪದವಿ ಪೂರ್ವ ಕಾಲೇಜು ಪುತ್ತೂರು ಇದರ ವಾಣಿಜ್ಯ ಸಂಘದ ವತಿಯಿಂದ 15/08/2021 ಆದಿತ್ಯವಾರ ಒನ್ಲೈನ್ ಮೂಲಕ ಕಾರ್ಪೊರೇಟ್ ಕ್ವಿಜ್ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ (2021-22) 9 ನೇ ತರಗತಿ, 10 ನೇ ತರಗತಿ ಹಾಗೂ 10 ನೇ ತರಗತಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಭಾಗವಹಿಸಬಹುದು.ಇದರಲ್ಲಿ ಒಟ್ಟು 50 ಪ್ರಶ್ನೆಗಳಿದ್ದು, ವಿದ್ಯಾರ್ಥಿಗಳು 10 ನಿಮಿಷದ ಒಳಗೆ ಉತ್ತರಿಸಿ ನೀಡಿದ ಲಿಂಕ್ ಗೆ ಕಳುಹಿಸಬೇಕು
ಸ್ಪರ್ಧೆಯು ಆದಿತ್ಯವಾರ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.
ಸಂಸ್ಥೆಯು ವಿಜೇತರಿಗೆ 2000/- ರೂಪಾಯಿ ನಗದು ಬಹುಮಾನವನ್ನು ಘೋಷಿಸಿದೆ.ಆಸಕ್ತರು ಸ್ಪರ್ಧೆಯಲ್ಲಿ ಭಾಗವಹಿಸಲು ಈ ಕೆಳಗೆ ನೀಡಿದ ಲಿಂಕ್ ಅನ್ನು ಆದಿತ್ಯವಾರ ಮದ್ಯಾಹ್ನ ಹನ್ನೆರಡು ಘಂಟೆಗೆ ಸರಿಯಾಗಿ ತೆರೆಯಬೇಕು.
ಸ್ಪರ್ಧಿಗಳು ತಮ್ಮ ಇಮೇಲ್ – ಐಡಿ ಮತ್ತು ಪಾಸ್ವರ್ಡ್ ನೊಂದಿಗೆ ತಯಾರಿರಬೇಕು
ಸ್ಪರ್ಧೆಯಲ್ಲಿ ಆಯೋಜಕರ ತೀರ್ಮಾನವೇ ಅಂತಿಮವಾಗಿರುತ್ತದೆ
ಕ್ವಿಝ್ ನ ಲಿಂಕ್ ಇಲ್ಲಿದೆ ????