Notice Board :

ಕನಸುಗಳು -2017 ಕಾರ್ಯಕ್ರಮದ ಸಮಾರೋಪ ಸಮಾರಂಭ

November 4, 2017

ಕನಸುಗಳು ಆಲೋಚನೆಗಳಾಗುತ್ತವೆ. ಆಲೋಚನೆಗಳು ಸೃಜನಶೀಲ ಕ್ರಿಯೆಗಳಾಗಿ ಪರಿವರ್ತನೆಗೊಳ್ಳುತ್ತವೆ. ಕನಸನ್ನು ಬಿತ್ತುವ ಮೂಲಕ ಶ್ರೇಷ್ಠ ಆಲೋಚನೆಗಳು ಹೊರಹೊಮ್ಮುತ್ತವೆ. ವಿದ್ಯಾರ್ಥಿಗಳಲ್ಲಿ ಉತ್ತಮ ನಡತೆ, ವ್ಯಕ್ತಿತ್ವ ರೂಪುಗೊಂಡರೆ ಭಾರತ ಶೀಘ್ರದಲ್ಲೇ ಜಗದ್ಗುರು ಎನಿಸಿಕೊಳ್ಳುತ್ತದೆ ಎಂದು ಬೆಟ್ಟಂಪಾಡಿ ಪ್ರಿಯದರ್ಶಿನಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ರಾಜೇಶ್ ಹೇಳಿದರು.

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಕನಸುಗಳಿಗೆ ವೇದಿಕೆಯನ್ನು ನೀಡುವ ಕನಸುಗಳು-2017 ಕಾರ್ಯಕ್ರಮದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

Dreams-valedictory

Dreams-valedictory (1)

Dreams-valedictory (2)

ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿ ಮತ್ತು ಸಜ್ಜನಿಕೆಯ ವಾರಸುದಾರರಾಗಬೇಕು. ಭಕ್ತಿ, ಜ್ಞಾನ ಮತ್ತು ನೈತಿಕತೆಯ ವಕ್ತಾರರಾಗಬೇಕು. ಸೋಲಿನಿಂದ ಕಂಗೆಡದೆ ಅದನ್ನು ಒಂದು ಸವಾಲಾಗಿ ಸ್ವೀಕರಿಸಿ ಸಾಧನೆಯತ್ತ ಸಾಗಬೇಕು. ವ್ಯಕ್ತಿಯು ತನ್ನ ದೇಶಕ್ಕೆ ಕೊಡುಗೆ ನೀಡಬೇಕಿದ್ದರೆ ಆತ ಉನ್ನತ ಮಟ್ಟದವನಾಗಬೇಕೆಂದಿಲ್ಲ. ಸಾಮಾನ್ಯ ಮನುಷ್ಯನಾಗಿದ್ದುಕೊಂಡು ಯಾವುದೇ ಕ್ಷೇತ್ರದಲ್ಲಿ ಪರಿಣಿತಿಯನ್ನು ಪಡೆದರೂ ಕನಸನ್ನು ನನಸಾಗಿಸಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಜತೆಕಾರ್ಯದರ್ಶಿ ಶ್ರೀ ಕೃಷ್ಣಕುಮಾರ್ ಶೆಟ್ಟಿ ಕಡಬ ಮಾತನಾಡಿ ಮೌಲ್ಯಗಳಿಗೆಲ್ಲ ನೀತಿಯೇ ಮೂಲ. ನಡೆನುಡಿ, ಆಚಾರ ವಿಚಾರಗಳಲ್ಲಿ ಮೌಲ್ಯಗಳನ್ನು ಮೇಳೈಸಿಕೊಂಡಾಗ ಬದುಕಿಗೊಂದು ಅರ್ಥ ಪ್ರಾಪ್ತವಾಗುತ್ತದೆ. ಸತ್ಯಧರ್ಮ, ನೈಜನೀತಿ, ಜೀವನನಿಷ್ಠೆ, ಪ್ರಾಮಾಣಿಕತೆಯನ್ನು ಅನುಸರಿಸುತ್ತಾ ಸಾಮಾಜಿಕ ಕಳಕಳಿ, ನೀತಿಬೋಧೆಯ ಸತ್ವವನ್ನು ಅರಿತುಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು.

ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ರವೀಂದ್ರ ಪಿ ಮಾತನಾಡಿ ಸ್ವಾಮಿ ವಿವೇಕಾನಂದರ ಧ್ಯೇಯ ಆದರ್ಶಗಳ ಪ್ರಭಾವದಲ್ಲಿ ಮುಂದುವರಿಯುವ ಈ ಸಂಸ್ಥೆಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದ್ದು ಅವರಲ್ಲಿ ಸಮಾಜಮುಖಿ ವ್ಯಕ್ತಿತ್ವವನ್ನು ರೂಪಿಸುವ ಗುರಿಯನ್ನು ಹಂದಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶ್ರೀ ಜೀವನ್‌ದಾಸ್, ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ರವಿ ಮುಂಗ್ಲಿಮನೆ ಮೊದಲಾದವರು ಉಪಸ್ಥಿತರಿದ್ದರು.

ಸಮಾರೋಪಕ್ಕೆ ಮುನ್ನ ಸರಕಾರಿ ಪದವಿಪೂರ್ವ ಕಾಲೇಜು ಸವಣೂರಿನ ಪ್ರಾಂಶುಪಾಲರಾದ ಶ್ರೀ. ಬಿ.ವಿ. ಸೂರ್ಯನಾರಾಯಣ ಅವರು ವ್ಯಕ್ತಿತ್ವ ವಿಕಸನ ತರಬೇತಿಯನ್ನು ನಡೆಸಿಕೊಟ್ಟರು. ವಿವಿಧ ಪ್ರೌಢಶಾಲೆಯ ಮಕ್ಕಳಿಗಾಗಿ ಗ್ರಾಮ ಸಂದರ್ಶನ ಮತ್ತು ’ಇಂಚರ’ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.

ಉಪನ್ಯಾಸಕಿ ಮಧುರ ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜಿನ ಉಪನ್ಯಾಸಕಿ ವಿನೋದ ಸರಸ್ವತಿ ಸ್ವಾಗತಿಸಿ ಉಪಪ್ರಾಂಶುಪಾಲರಾದ ಶ್ರೀ ಪರಮೇಶ್ವರ ಶರ್ಮ ವಂದಿಸಿದರು.

Related News

NDRF SafetyAndDisasterResponse Training-2026

VivekaMunnudi-2026

International DayofYoga-2026

Apply Now

Seize the Opportunity – Embark on an Unforgettable Educational Adventure!

Sri Sudheer M K

Studied B.Sc. (P.E.M.) in St. Aloysius College Mangalore.

Completed M. Sc. Mathematics from Mangalore University in May 2001.

Having 21 years of teaching experience in different colleges in Mysore and Mangalore. Training students for KCET, JEE exams.

Mathematics

Dr. Sushanth V Rai

M.Sc., PhD 5 years exp. Five years record of success in nutritional, phytochemical and biomedical research.

Worked as quality control analyst in food industry.

Worked as Research Associate in Aquatic Environment Management Department, College of Fisheries, Mangalore.

Worked as Senior Research Fellow in Department of Biosciences, Mangalore University.

Published research papers in national and international journals.

Biology